" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Monday 17 August 2015

69ನೇ ಸ್ವಾತಂತ್ರ್ಯ ದಿನಾಚರಣೆ


ಧ್ವಜಾರೋಹಣ : ಶ್ರೀಮತಿ ಸೌಮ್ಯಾ ಮಹೇಶ್ , ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ


ಮಕ್ಕಳ ಮೆರವಣಿಗೆ



ಮುಖ್ಯ ಅತಿಥಿ : ಈಶ್ವರ ಭಟ್ ಕಾನ

ಶುಭಾಶಂಸನೆ : ಕೆ.ಪ್ರಕಾಶ್ ಭಟ್

ಅಧ್ಯಕ್ಷತೆ : ಕೆ.ಎನ್. ಕೃಷ್ಣ ಭಟ್ , ಶಾಲಾ ವ್ಯವಸ್ಥಾಪಕರು

ಬಹುಮಾನ ವಿತರಣೆ

ಸ್ವಾತಂತ್ರ್ಯ ಹೋರಾಟ ಪುಸ್ತಕ ಬಿಡುಗಡೆ

ನಾಡೋಜ ಡ.ಕಯ್ಯಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ



Monday 10 August 2015



ಕರ್ನಾಟಕ ಕಾಸರಗೋಡಿನ ಕನ್ನಡದ ಗಟ್ಟಿದನಿ ಕಯ್ಯಾರ ಕಿಞ್ಞಣ್ಣ ರೈ ಅಸ್ತಂಗತ

ಕಾಸರಗೋಡು, ಆಗಸ್ಟ್ 09: ಸ್ವಾತಂತ್ರ್ಯ ಹೋರಾಟಗಾರ, ಕವಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕ ಗಡಿ ನಾಡಲ್ಲಿ ಕನ್ನಡದ ಗಟ್ಟಿದನಿಯಾಗಿದ್ದ 101 ವರ್ಷದ ಹಿರಿಯ ಚೇತನ ಕಯ್ಯಾರ ಕಿಞ್ಞಣ್ಣ ರೈ ಅವರು ಭಾನುವಾರ ಬದಿಯಡ್ಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಕಯ್ಯಾರ ಕಿಞ್ಞಣ್ಣ ರೈ ಅಖಿಲ ಮಹಾಕವಿ, ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ ಸದಾಕಾಲ ಸ್ಮರಣೀಯರು. ರೈಗಳ ಕನಸು ನನಸಾಗಲಿಲ್ಲ: ರಾಜ್ಯ ಗುರುತಿಸುವಿಕೆಯು ಭಾಷಾವಾರು ಆದ್ಯತೆಯ ಮೇಲೆ ಸರಿಯಾಗಿ ಆಗಿಲ್ಲ. ತುಳುನಾಡು ಕರ್ನಾಟಕದ ಭಾಗ ಎಂಬ ಮಹಾಜನ ಆಯೋಗ ವರದಿಗೆ ಯಾವುದೇ ಪುಷ್ಟಿ ದೊರೆತಿಲ್ಲ. ಕಾಸರಗೋಡು ಕನ್ನಡನಾಡಿಗೆ ಸೇರಿದರೆ ಅದೇ ನನ್ನ ಸಿಗುವ ದೊಡ್ಡ ಬಹುಮಾನ ಎಂದು ಹೇಳುತ್ತಿದ್ದ ರೈಗಳು ಈಗ ನೆನಪು ಮಾತ್ರ.[ಗಡಿನಾಡಿನ ಕಿಡಿ ಕಯ್ಯಾರ]

ತುಂಬು ಕುಟುಂಬದ ಸಂಸಾರಿ : ಕಾಸರಗೋಡಿನ ಪೆರಡಾಲ ಹಳ್ಳಿಯಲ್ಲಿ ದುಗ್ಗಪ್ಪ ರೈ ಮತ್ತು ದೇಯ್ಯಕ್ಕ ರೈ ದಂಪತಿಗಳಿಗೆ 1915 ಜೂನ್ 8 ರಂದು ಜನಿಸಿದ ರೈಗಳ ಮನೆ ಮಾತು ತುಳು. ಆದರ, ಕನ್ನಡ, ತುಳು, ಮಲೆಯಾಳಂ, ಸಂಸ್ಕೃತ ಬಲ್ಲವರಾಗಿದ್ದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರನ್ನು ಗುರುವಿನಂತೆ ಕಾಣುತ್ತಿದ್ದರು. ಪತ್ನಿ ಉಞ್ಞಕ್ಕ ಮತ್ತು ಎಂಟು ಮಕ್ಕಳ ಸುಖೀ ಸಂಸಾರವನ್ನು ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ಕಳೆದವರು. ನವಜೀವನ ಹೈಸ್ಕೂಲಿನ ಶಿಕ್ಷಕರಾಗಿದ್ದ ಕಯ್ಯಾರರು ಪ್ರವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ಕೂಡಾ ಕೊಡುಗೆ ಸಲ್ಲಿಸಿದ್ದಾರೆ. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಸಾಹಿತಿಯಾಗಿ ರೈಗಳು: ದುಡಿತವೆ ನನ್ನ ದೇವರು ಎನ್ನುವದು

ರೈಯವರ ಆತ್ಮಕಥನ. 'ಕಯ್ಯಾರ ಕಿಞ್ಞಣ್ಣ ರೈ'ಯವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದರು. ರೈಯವರಿಗೆ 'ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ, 'ನಾಡೋಜ'ಪ್ರಶಸ್ತಿ, 66 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಪಂಪ ಪ್ರಶಸ್ತಿ ಗಳಿಸಿದ್ದರು.




ಹಾಡೊಮ್ಮೆ ಹಾಡಬೇಕು

ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಹೌದು ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಮೌಡ್ಯ ಮುರಿಯುವ ಬನ್ನಿ
ಮೌಡ್ಯ ಮುರಿಯುವ ಬನ್ನಿ
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ




ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹದಿನಾಲ್ಕು ಲೋಕವ
ಸಪ್ತ ಸಾಗರವ
ಹದಿನಾಲ್ಕು ಲೋಕವ
ಸಪ್ತ ಸಾಗರವ
ಗೆಲ್ಲುವ ಶಕ್ತಿಯು ನಮಗು೦ಟು
ಗೆಲ್ಲುವ ಶಕ್ತಿಯು ನಮಗು೦ಟು
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಕಯ್ಯಾರ ಕಿಞಞಣ್ಣ ರೈ